---Advertisement---

ಬೋಧಕೇತರ ನೌಕರರ ಸಂಘಕ್ಕೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಾರ್ಯದರ್ಶಿ ಗಳಿಗೆ ಸನ್ಮಾನ

January 24, 2026 2:41 PM
ಬೋಧಕೇತರ ನೌಕರರ ಸಂಘಕ್ಕೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಾರ್ಯದರ್ಶಿ ಗಳಿಗೆ ಸನ್ಮಾನ
---Advertisement---

 

ಮೈಸೂರು ಜಿಲ್ಲೆಯ ಬೋಧಕೇತರ ನೌಕರರ ಮೊದಲ ಕಾರ್ಯಕ್ರಮ ಮೈಸೂರಿನ ಉಪ ನಿರ್ದೇಶಕರ ಕಚೇರಿಯ ಆವರಣದಲ್ಲಿ ಕಳೆದ ಶುಕ್ರವಾರ ನಡೆಯಿತು.

ಈ ಕಾರ್ಯಕ್ರಮದಲ್ಲಿ 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ, ನೂತನ ನಾಮ ನಿರ್ದೇಶನ ಆಯ್ಕೆಗೊಂಡವರಿಗೆ ಪ್ರಮಾಣಪತ್ರ ವಿತರಣೆ, ಬೋಧಕೇತರ ನೌಕರರ ಸಂಘಕ್ಕೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಾರ್ಯದರ್ಶಿ ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರಿನ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರಾದ  ಕೆ ಎಸ್ ಪ್ರಕಾಶ್ ರವರು ನೆರವೇರಿಸಿ ಮಾತನಾಡುತ್ತಾ ಹೊಸ ವರ್ಷದ ಶುಭಾಶಯಗಳು ತಿಳಿಸಿ ಬೋಧಕೇತರ ನೌಕರರು ಕಚೇರಿಯಲ್ಲಿ ಹೇಗೆ ಕೆಲಸ ನಿರ್ವಹಿಸಬೇಕು. ಅವರ ಕೆಲಸ ಹೇಗೆ ಮುಖ್ಯವಾಗುತ್ತದೆ ಎಂದು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು. ಉಪನಿರ್ದೇಶಕರಾದ (ಆಡಳಿತ)  ಡಿ. ಉದಯಕುಮಾರ್ ರವರು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ನೌಕರರು ತಮ್ಮ ಕೆಲಸದ ಜೊತೆಗೆ ಕ್ರೀಡೆ, ಸದಭಿರುಚಿಯ ಹವ್ಯಾಸಗಳಲ್ಲಿ  ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಲಹೆ ನೀಡಿದರು.

 

ನೂತನವಾಗಿ ಸಂಘಬೋಧಕೇತರ ನೌಕರರ ಸಂಘಕ್ಕೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಾರ್ಯದರ್ಶಿ ಗಳಿಗೆ ಸನ್ಮಾನಕ್ಕೆ ನಾಮನಿರ್ದೇಶನಗೊಂಡಂತ ನೌಕರರಿಗೆ ಪ್ರಮಾಣ ಪತ್ರವನ್ನು  ಸಿ .ಆರ್ .ನಾಗರಾಜಯ್ಯ, ಪ್ರಾಂಶುಪಾಲರು, ಡಯಟ್ ಮೈಸೂರು ಅವರು ವಿತರಣೆ ಮಾಡಿದರು.

ಜಿಲ್ಲಾಧ್ಯಕ್ಷರಾದ ಶ್ರೀ ರೇವಣ್ಣ ಮಾತನಾಡಿ ಸಂಘದ ಹಿನ್ನೆಲೆಯನ್ನು ತಿಳಿಸುತ್ತಾ ಜೊತೆಗೆ ಸಮಸ್ಯೆ, ಬೇಡಿಕೆ ಎಲ್ಲದರ ಬಗ್ಗೆ ಪರಸ್ಪರ ಚರ್ಚಿಸಿ, ಪರಿಹಾರ ಕೈಗೊಳ್ಳುವತ್ತ ಕ್ರಮವಹಿಸಲಾಗುವುದು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಎಂ. ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೈಸೂರು ತಾಲೂಕು, ಕೆ .ಜೆ. ಜಯಕಾಂತ ಹಿರಿಯ ನಾಯಕರು ನಿರ್ದೇಶಕರು .ಜೆ.ಡಿ.ಆಫೀಸ್,  ರಾಜ್ಯ ಕಾರ್ಯದರ್ಶಿಗಳಾದ  ಎಂ.ಕೆ. ಗಣೇಶ್ ಮತ್ತು ಆನಂದ ಹಾಗೂ ಎಂ

ಕೆ. ಸ್ವಾಮಿ ಮತ್ತು ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Join WhatsApp

Join Now

Join Telegram

Join Now

Leave a Comment