ಮೈಸೂರು: ನೆರೆದಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು ತಾಲ್ಲೂಕಿನ ದೇವಲಾಪುರ ಗ್ರಾಮದ ಅರುಣೋದಯ ವಿದ್ಯಾಸಂಸ್ಥೆ ಮತ್ತು ಶ್ರೀ ನಂಜುಂಡೇಶ್ವರ ಎಜುಕೇಷನ್ ಟ್ರಸ್ಟ್ ನ ಅರುಣೋದಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಹಾಗೂ ಮಾತೃಶ್ರೀ ಸಂಸ್ಕೃತ ಪಾಠಶಾಲೆಯ ಆವರಣದ ಅರಣೋತ್ಸವ- 2025-26 ಮಹೋತ್ಸವ ಸಂಭ್ರಮದಿಂದ ನಡೆಯಿತು.

ಶಾಲಾ ಆವರಣದಲ್ಲಿ ನಡೆದ ಅರುಣೋತ್ಸವವನ್ನು ನಗರಪಾಲಿಕೆ ಮಾಜಿ ಸದಸ್ಯ ಪ್ರದೀಪ್ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಬಿಗ್ ಬಾಸ್ ನೋಡುವ ಆಸಕ್ತಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಡೆಯೂ ಬರಬೇಕಿದೆ. ಮನರಂಜನೆ ಜೀವನದ ಭಾಗವಾಗಬೇಕು. ಆದರೆ, ಜೀವನವೇ ಮನರಂಜನೆ ಆಗಬಾರದು. ಪ್ರತಿ ಮಕ್ಕಳೊಂದಿಗೆ ಕುಟುಂಬದವರು ಬೆರಯಬೇಕಿದೆ. ಮುಂದಿನ ಪೀಳಿಗೆಯಲ್ಲಿ ಸಂಸ್ಕಾರ ಕಣ್ಮರೆಯಾಗುವ ಆತಂಕ ಶುರುವಾಗಿದೆ. ಗ್ರಾಮೀಣ ಭಾಗದಲ್ಲಿ ಆದರೂ ಸಂಸ್ಕಾರ ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ. ಯಾರೇ ಸಾಧಕರು, ಅಧಿಕಾರಿಗಳು ಗ್ರಾಮೀಣ ಭಾಗದಿಂದಲೇ ಬಂದಿದ್ದು, ಆ ಗ್ರಾಮೀಣ ತನವನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.

ಕಾರ್ಯಕ್ರಮದ ಸಾನಿದ್ಯವನ್ನು ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಡಾ.ಶ್ರೀ.ಶಾಂತಮಲ್ಲಿಕಾರ್ಜುನಸ್ವಾಮಿ, ಅಧ್ಯಕ್ಷತೆಯನ್ನು ದೇವಲಾಪುರದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ನಿ.ಪ್ರ.ಸ್ವ. ಜಡೇಸ್ವಾಮೀಜಿ, ಚಿಕ್ಕಬಳ್ಳಾಪುರ ಎಸ್.ಜೆ.ಸಿ. ತರಬೇತುದಾರ, ಉಪನ್ಯಾಸಕ ಮುಖ್ಯ ಅತಿಥಿಯಾಗಿ ಜಿ.ಎನ್.ಲೋಹಿತ್ ಆಗಮಿಸಿದ್ದರು. ಬೆಂಗಳೂರು ಧ್ವನಂತರಿ ಲೋಕಸಿರಿ ಬಯೋಟೆಕ್ ಪ್ರೈವೇಟ್ ಲಮಿಟೆಡ್ ಉದ್ಯಮಿ ಹಾಗೂ ಆರೋಗ್ಯ ಸಮಾಲೋಚಕ ಡಾ.ವಿಶ್ವರಾಜ್ ಬಹುಮಾನ ವಿತರಿಸಿದರು. ನಿವೃತ್ತ ಅಭಿಯಂತರ ಸುಬ್ರಹ್ಮಣ್ಯ, ಅರುಣೋದಯ ವಿದ್ಯಾಸಂಸ್ಥೆ ಮತ್ತು ಶ್ರೀ ನಂಜುಂಡೇಶ್ವರ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಎಂ.ಸಿದ್ದರಾಜು ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ವಿದ್ಯಾ ಹಾಗೂ ಇಂಚರರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಅರಣೋದಯ ಶಾಲೆ ಮುಖ್ಯ ಶಿಕ್ಷಕರಾದ ಚಂದ್ರಶೇಖರ್, ಪ್ರಭಾಮಣಿ, ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.







1 thought on “ಮಕ್ಕಳ ಸಾಂಸ್ಕೃತಿಕ ಪ್ರತಿಭೆ ಹೊರತಂದ ಅರಣೋತ್ಸವ”